ಗ್ಲೋಬಲ್ ಮಾರಾಟ

Amazon ಮೂಲಕ ಸ್ಥಳೀಯವಾಗಿ ತಯಾರಿಸಿ ಜಾಗತಿಕವಾಗಿ ಮಾರಾಟ ಮಾಡಿ

Amazon ಗ್ಲೋಬಲ್ ಮಾರಾಟ ಮೂಲಕ, ನಿಮ್ಮ ಬ್ಯುಸಿನೆಸ್ ಅನ್ನು ಜಾಗತಿಕವಾಗಿ ವಿಸ್ತರಿಸಿ ಮತ್ತು ಜಗತ್ತಿನಾದ್ಯಂತ ಇರುವ ಮಿಲಿಯನ್‌ಗಟ್ಟಲೆ ಕಸ್ಟಮರ್‌ಗಳನ್ನು ತಲುಪಿ
ನೋಂದಾಯಿಸಲು ಇದು 15 ನಿಮಿಷಗಳಿಗಿಂತ ಕಡಿಮೆ ಸಮಯ ತೆಗೆದುಕೊಳ್ಳುತ್ತದೆ
Amazon ಗ್ಲೋಬಲ್ ಮಾರಾಟ- ಭಾರತದಲ್ಲಿನ ಸ್ಥಳೀಯ ಪ್ರಾಡಕ್ಟ್‌ಗಳನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವುದು

Amazon ಗ್ಲೋಬಲ್ ಮಾರಾಟ ಎಂದರೇನು?

Amazon ಗ್ಲೋಬಲ್ ಮಾರಾಟ ಇಕಾಮರ್ಸ್ ಎನ್ನುವುದು ರಫ್ತು ಪ್ರೋಗ್ರಾಂ ಅದು ನಿಮ್ಮ ವ್ಯವಹಾರವನ್ನು ಭಾರತದಿಂದ ಜಾಗತಿಕ ಮಾರುಕಟ್ಟೆಗಳಿಗೆ ಕೊಂಡೊಯ್ಯಲು ಸಹಾಯ ಮಾಡುತ್ತದೆ. 200 ಮಿಲಿಯನ್ ಪಾವತಿಸಿದ Prime ಸದಸ್ಯರು ಮತ್ತು ವಿಶ್ವದಾದ್ಯಂತ 300 ಮಿಲಿಯನ್‌ಗೂ ಹೆಚ್ಚು ಕಸ್ಟಮರ್‌ಗಳೊಂದಿಗೆ, ನೀವು 200 ಕ್ಕೂ ಹೆಚ್ಚು ದೇಶಗಳು ಮತ್ತು ಪ್ರದೇಶಗಳಲ್ಲಿನ 18 ಜಾಗತಿಕ ಮಾರುಕಟ್ಟೆಗಳಲ್ಲಿ Amazon ‌ನ ವಿಶ್ವದ ಪ್ರಮಾಣದ ಲಾಭವನ್ನು ಪಡೆಯಬಹುದು.

Amazon ಮೂಲಕ ಏಕೆ ರಫ್ತು ಮಾಡಬೇಕು?

ಜಾಗತಿಕ ವ್ಯಾಪ್ತಿ

200+

ದೇಶಗಳು ಮತ್ತು ಪ್ರಾಂತ್ಯಗಳು ಮಾರಾಟಗಾರರು ತಮ್ಮ ಬ್ಯುಸಿನೆಸ್ ಅನ್ನು ಮಿಲಿಯನ್‌ಗಟ್ಟಲೆ ಶಾಪರ್‌ಗಳಿಗೆ ವಿಸ್ತರಿಸಲು ಮತ್ತು ತಲುಪಲು

ಸಂಭಾವ್ಯ ಆದಾಯ

$3 ಬಿಲಿಯನ್+

Amazon ಗ್ಲೋಬಲ್ ಮಾರಾಟದಲ್ಲಿ, ಇಕಾಮರ್ಸ್ ರಫ್ತು ಮಾರಾಟ, ಭಾರತೀಯ ಉದ್ಯಮಿಗಳಿಗೆ ರಫ್ತು ಮಾಡಲು ಸಹಾಯ ಮಾಡುತ್ತದೆ

ಬೆಳೆಯುತ್ತಿರುವ ಸಮುದಾಯ

200 ಮಿಲಿಯನ್

ವಿಶ್ವದಾದ್ಯಂತ ಪಾವತಿಸಿದ Amazon Prime ಸದಸ್ಯರು
Amazon ರಫ್ತು ವ್ಯವಹಾರ- Amazon ಗ್ಲೋಬಲ್ ಮಾರಾಟ ಪ್ರಯೋಜನಗಳು

ಜಾಗತಿಕವಾಗಿ ನಿಮ್ಮ ವ್ಯಾಪಾರ ಬೆಳೆಸಿರಿ

ನೀವು ಹೊಸ ಅಂತಾರಾಷ್ಟ್ರೀಯ ಕಸ್ಟಮರ್‌ಗಳನ್ನು ಪಡೆದುಕೊಳ್ಳುವ ಅವಕಾಶವಿದ್ದಾಗ ಭಾರತಕ್ಕೆ ಏಕೆ ಸೀಮಿತವಾಗುತ್ತೀರಿ? Amazon ಗ್ಲೋಬಲ್ ಮಾರಾಟ ನಿಮ್ಮ ವ್ಯಾಪಾರವನ್ನು ವಿಶ್ವದಾದ್ಯಂತ ಮಿಲಿಯನ್‌ಗಟ್ಟಲೆ ಕಸ್ಟಮರ್‌ ಬಳಿಗೆ ಕೊಂಡೊಯ್ಯುತ್ತದೆ.
Amazon ಗ್ಲೋಬಲ್ ಮಾರಾಟ ಇಂಡಿಯಾ

ವರ್ಷಪೂರ್ತಿ ನಿಮ್ಮ
ಮಾರಾಟವನ್ನು ವೈವಿಧ್ಯಮಯಗೊಳಿಸಿ

ದೀಪಾವಳಿ ಮಾತ್ರವಲ್ಲ, ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿರುವ ಮಾರಾಟದ ಋತುಮಾನಗಳು ಮತ್ತು ಸೇಲ್ ಈವೆಂಟ್‌ಗಳಾದ Prime Day, ಕ್ರಿಸ್‌ಮಸ್, Blocked Friday, Cyber Monday ಮತ್ತು ರಂಜಾನ್‌ಗಳ ಲಾಭವನ್ನು ಸಹ ನೀವು ಪಡೆಯಬಹುದು. ಗ್ಲೋಬಲ್ ಆಗಿ ಮಾರಾಟ ಮಾಡಲು 30+ ವರ್ಗಗಳಿಂದ ಆರಿಸಿ.
Fulfillment by Amazon FBA

ಇದಕ್ಕಾಗಿ Amazon ನ ಪರಿಕರಗಳನ್ನು ಬಳಸಿ
ಸುಲಭ ವಿಸ್ತರಣೆ

Fulfillment by Amazon (FBA) ಮತ್ತು ಕಸ್ಟಮರ್ ಸೇವೆಯಂತಹ ಅಂತಾರರಾಷ್ಟ್ರೀಯ ಲಾಜಿಸ್ಟಿಕ್ಸ್‌ ಮೂಲಕ Amazon ನಿಮಗೆ ಸಹಾಯ ಮಾಡುವಾಗ ನಿಮ್ಮ ಬ್ಯುಸಿನೆಸ್ ಮೇಲೆ ನೀವು ಗಮನ ಹರಿಸಬಹುದು.
ಇಂದೇ ನಿಮ್ಮ ಗ್ಲೋಬಲ್ ಮಾರಾಟ ಪ್ರಯಾಣ ಪ್ರಾರಂಭಿಸಿ!
ನೋಂದಾಯಿಸಲು ಇದು 15 ನಿಮಿಷಗಳಿಗಿಂತ ಕಡಿಮೆ ಸಮಯ ತೆಗೆದುಕೊಳ್ಳುತ್ತದೆ

ಎಲ್ಲಿಗೆ ರಫ್ತು ಮಾಡಬೇಕು?

ಉತ್ತರ ಅಮೆರಿಕ

USA, ಕೆನಡಾ ಮತ್ತು ಮೆಕ್ಸಿಕೋ
ಉತ್ತರ ಅಮೆರಿಕಾದಲ್ಲಿ ಮಾರಾಟ ಮಾಡಿ ಮತ್ತು ಭಾರತ ಮತ್ತು ಇತರ ಅಭಿವೃದ್ಧಿ ಹೊಂದಿದ ದೇಶಗಳ ನಡುವೆ ವಿಸ್ತರಿಸುತ್ತಿರುವ ರಫ್ತು ವ್ಯಾಪಾರದಿಂದ ಹೆಚ್ಚು ಪ್ರಯೋಜನ ಪಡೆಯಿರಿ.

ಯೂರೋಪ್‌

ಜರ್ಮನಿ, UK, ಫ್ರಾನ್ಸ್, ಇಟಲಿ, ಸ್ಪೇನ್, ಸ್ವೀಡನ್, ಪೋಲೆಂಡ್ ಮತ್ತು ನೆದರ್ಲ್ಯಾಂಡ್ಸ್
ಕೇವಲ 1 ಖಾತೆಯ ಮೂಲಕ, Amazon ‌ನ ಯುರೋಪಿಯನ್ ಸ್ಟೋರ್‌ಗಳಲ್ಲಿ ಶಾಪಿಂಗ್ ಮಾಡುವ 8 ವಿವಿಧ ದೇಶಗಳಲ್ಲಿ ನೀವು ಕಸ್ಟಮರ್‌ಗಳನ್ನು ತಲುಪಬಹುದು.

ಏಷ್ಯಾ- ಪೆಸಿಫಿಕ್

ಜಪಾನ್, ಸಿಂಗಾಪುರ್ ಮತ್ತು ಆಸ್ಟ್ರೇಲಿಯಾ
ಜಪಾನ್‌ನಲ್ಲಿ ಮಾರಾಟ ಮಾಡುವ ಮೂಲಕ ಅಥವಾ ಸಿಂಗಾಪುರ ಅಥವಾ ಆಸ್ಟ್ರೇಲಿಯಾದಲ್ಲಿ ಬೆಳೆಯುತ್ತಿರುವ ಕಸ್ಟಮರ್‌ಗಳ ಸಂಖ್ಯೆಯಿಂದ ಲಾಭ ಪಡೆಯುವ ಮೂಲಕ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯ ಭಾಗವಾಗಿ.

ಮಧ್ಯ ಪ್ರಾಚ್ಯ

UAE ಮತ್ತು ಸೌದಿ ಅರೇಬಿಯಾ
UAE ಮತ್ತು ಸೌದಿ ಅರೇಬಿಯಾದ ಮಧ್ಯಪ್ರಾಚ್ಯ ಮಾರುಕಟ್ಟೆಗಳಲ್ಲಿ ಮಾಸಿಕವಾಗಿ ಯಾವುದೇ ಸಬ್‌ಸ್ಕ್ರಿಪ್ಶನ್ ಶುಲ್ಕ ಇಲ್ಲದೇ ಮಾರಾಟ ಪ್ರಾರಂಭಿಸಿ.

Amazon ಗ್ಲೋಬಲ್ ಮಾರಾಟಗಾರ ಆಗುವುದು ಹೇಗೆ?

ಭಾರತದಿಂದ Amazon ಗ್ಲೋಬಲ್ ಮಾರಾಟಗಾರ

1. ಎಲ್ಲಿ ಮತ್ತು ಯಾವುದನ್ನು ಮಾರಾಟ ಮಾಡಬೇಕೆಂದು ನಿರ್ಧರಿಸಿ

ನಿಮ್ಮ ರಫ್ತು ವ್ಯವಹಾರದ ಮಾರುಕಟ್ಟೆ ಅವಕಾಶಗಳನ್ನು ಅರ್ಥಮಾಡಿಕೊಳ್ಳಿ ಮತ್ತು ಮಾರಾಟಕ್ಕೆ ಸೂಕ್ತವಾದ ಅಂತರರಾಷ್ಟ್ರೀಯ ಮಾರುಕಟ್ಟೆ‌ಗಳನ್ನು ಆಯ್ಕೆ ಮಾಡಿ.
amazon ಗ್ಲೋಬಲ್ ಆಗಿ ಸೇಲ್ಸ್ ಮಾಡಿ

2. ನೋಂದಣಿ ಮಾಡಿ ಮತ್ತು ನಿಮ್ಮ ಪ್ರಾಡಕ್ಟ್‌ಗಳನ್ನು ಲಿಸ್ಟ್ ಮಾಡಿ

Amazon ಗ್ಲೋಬಲ್ ಮಾರಾಟಗಾರ ಆಗಿ ನೋಂದಾಯಿಸಿ ಮತ್ತು ಮಾರುಕಟ್ಟೆಯಾದ್ಯಂತ ನಿಮ್ಮ ಪ್ರಾಡಕ್ಟ್ ಲಿಸ್ಟಿಂಗ್‌ಗಳನ್ನು ತ್ವರಿತವಾಗಿ ಮತ್ತು ಸುಲಭವಾಗಿ ನಿರ್ವಹಿಸಲು ನಿಮಗೆ ಅನುಮತಿಸಲು Amazon ‌ನ ಅತ್ಯಾಧುನಿಕ ಲಾಜಿಸ್ಟಿಕ್ಸ್ ಸೇವೆಗಳನ್ನು ಬಳಸಿ.
Amazon ಡೆಲಿವರಿ

3. ನಿಮ್ಮ ಪ್ರಾಡಕ್ಟ್‌ಗಳನ್ನು ಡೆಲಿವರಿ ಮಾಡಿ

ಜಾಗತಿಕವಾಗಿ ಡೆಲಿವರಿ ಮಾಡುವ ಕುರಿತು ಚಿಂತಿಸುತ್ತಿದ್ದೀರಾ? ನಿಮ್ಮ ಪ್ರಾಡಕ್ಟ್‌ಗಳನ್ನು ಜಗತ್ತಿನ ಯಾವುದೇ ಭಾಗಕ್ಕೆ ಶಿಪ್ಪಿಂಗ್ ಮಾಡಲು Fulfillment by Amazon (FBA) ಸರ್ವಿಸ್‌ಗಳನ್ನು ಬಳಸಿ. ನೀವು ಇತರ ಶಿಪ್ಪಿಂಗ್ ವಿಧಾನಗಳನ್ನು ಸಹ ಆಯ್ಕೆ ಮಾಡಬಹುದು.
Amazon ಗ್ಲೋಬಲ್ ಮಾರಾಟ ಪೇಮೆಂಟ್

4. ಹಣ ಪಡೆಯಿರಿ ಮತ್ತು ನಿಮ್ಮ ಬ್ಯುಸಿನೆಸ್ ಅಭಿವೃದ್ಧಿಗೊಳಿಸಿ

ಮಾರಾಟ ಆದ ನಂತರ ನಿಮ್ಮ ಖಾತೆಗೆ ಹಣ ಪಡೆಯಿರಿ. Amazon ‌ನ ಅಂತರರಾಷ್ಟ್ರೀಯ ಉಪಕರಣಗಳು ಮತ್ತು ಸೇವೆಗಳನ್ನು ಬಳಸಿಕೊಂಡು ನಿಮ್ಮ ರಫ್ತು ವ್ಯವಹಾರವನ್ನು ವಿಸ್ತರಿಸುವ ಕಡೆಗೆ ಗಮನಹರಿಸಿ.
ಇದನ್ನು ನೋಡಿ: ಭಾರತದ ಗ್ಲೋಬಲ್ ಮಾರಾಟಗಾರರ ಯಶಸ್ಸಿನ ಕಥೆಗಳು
ನೋಂದಾಯಿಸಲು ಇದು 15 ನಿಮಿಷಗಳಿಗಿಂತ ಕಡಿಮೆ ಸಮಯ ತೆಗೆದುಕೊಳ್ಳುತ್ತದೆ
2025 ರ ಹೊತ್ತಿಗೆ, Amazon ‌ನ ಜಾಗತಿಕ ಹೆಜ್ಜೆಗುರುತನ್ನು ನಾವು $10 ಬಿಲಿಯನ್ ಮೌಲ್ಯದ "ಮೇಕ್ ಇನ್ ಇಂಡಿಯಾ" ಸರಕುಗಳನ್ನು ರಫ್ತು ಮಾಡಲು ಬಳಸುತ್ತೇವೆ.
ಜೆಫ್ ಬೆಜೊಸ್ಸ್ಥಾಪಕ ಮತ್ತು CEO, Amazon Inc.
Amazon ಮಾರಾಟಗಾರ ಗೈಡ್ ಚೆಕ್‌ಲಿಸ್ಟ್

ಗ್ಲೋಬಲ್ ಮಾರಾಟ ಕುರಿತು ಸಂಪೂರ್ಣ ಮಾಹಿತಿ

Amazon ಗ್ಲೋಬಲ್ ಮಾರಾಟ ಮತ್ತು ಜಾಗತಿಕವಾಗಿ ಯಶಸ್ವಿಯಾಗಿ ವಿಸ್ತರಿಸಿದ ಸಾವಿರಾರು ಭಾರತೀಯ ಮಾರಾಟಗಾರರ ಕಥೆಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಿ.
Fulfillment by Amazon FBA

ಶಿಪ್ಪಿಂಗ್ ಸುಲಭವಾಗಿದೆ

ಇದನ್ನು ನೀವು ಮಾರಾಟ ಮಾಡಿರಿ, ಅದನ್ನು ನಾವು ಶಿಪ್ ಮಾಡುತ್ತೇವೆ. Fulfillment by Amazon (FBA) ಮೂಲಕ, ನೀವು ಮಾಡಬೇಕಾಗಿರುವುದು ನಿಮ್ಮ ಪ್ರಾಡಕ್ಟ್‌ಗಳನ್ನು Amazon ನ ಅಂತರರಾಷ್ಟ್ರೀಯ ಫುಲ್‌ಫಿಲ್ಮೆಂಟ್ ಸೆಂಟರ್‌ಗಳಿಗೆ ಶಿಪ್ ಮಾಡುವುದು ಮಾತ್ರ. ನಿಮ್ಮ ಪರವಾಗಿ Amazon ಪ್ರಾಡಕ್ಟ್‌ಗಳನ್ನು ಸಂಗ್ರಹಿಸುತ್ತದೆ, ಪ್ಯಾಕ್ ಮಾಡುತ್ತದೆ ಮತ್ತು ಡೆಲಿವರಿ ಮಾಡುತ್ತದೆ.

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ಗೃಹ ಜವಳಿಗಳನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾರಾಟ ಮಾಡಲು ನಿಯಂತ್ರಕ ಅವಶ್ಯಕತೆಗಳು ಯಾವುವು?
Amazon ಗ್ಲೋಬಲ್ ಮಾರಾಟ ಕಾರ್ಯಕ್ರಮವು ಭಾರತೀಯ MSME ಗಳು/ಉದ್ಯಮಿಗಳು / ಚಿಲ್ಲರೆ ವ್ಯಾಪಾರಿಗಳಿಗೆ ತಮ್ಮ ಪ್ರಾಡಕ್ಟ್‌ಗಳನ್ನು ಇಕಾಮರ್ಸ್ ಮೂಲಕ ವಿಶ್ವಾದ್ಯಂತ ಕಸ್ಟಮರ್‌ಗಳಿಗೆ ಮಾರಾಟ ಮಾಡಲು ಪ್ರವೇಶವನ್ನು ನೀಡುತ್ತದೆ.
Amazon ಗ್ಲೋಬಲ್ ಮಾರಾಟ ಹೇಗೆ ಕೆಲಸ ಮಾಡುತ್ತದೆ?
Amazon ಗ್ಲೋಬಲ್ ಮಾರಾಟ ಅಮೆರಿಕದ (US, ಕೆನಡಾ, ಮೆಕ್ಸಿಕೊ ಮತ್ತು ಬ್ರೆಜಿಲ್), ಯುರೋಪ್‌ನ (ಸ್ಪೇನ್, ಫ್ರಾನ್ಸ್, ಇಟಲಿ, ಜರ್ಮನಿ, ಸ್ವೀಡನ್, ನೆದರ್ಲ್ಯಾಂಡ್ಸ್, ಪೋಲೆಂಡ್, ಟರ್ಕಿ ಮತ್ತು ಯುಕೆ), ಮಧ್ಯಪ್ರಾಚ್ಯದ (UAE, ಸೌದಿ ಅರೇಬಿಯಾ) ಮತ್ತು ಏಷ್ಯಾ-ಪೆಸಿಫಿಕ್‌ನ (ಜಪಾನ್, ಸಿಂಗಾಪುರ್ ಮತ್ತು ಆಸ್ಟ್ರೇಲಿಯಾ) ನ 18 ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲು ಪ್ರವೇಶವನ್ನು ನೀಡುತ್ತದೆ.
ಈ ಪ್ರೋಗ್ರಾಂನೊಂದಿಗೆ, ಭಾರತೀಯ MSME ಗಳು / ಉದ್ಯಮಿಗಳು / ಚಿಲ್ಲರೆ ವ್ಯಾಪಾರಿಗಳು ತಮ್ಮ ಪ್ರಾಡಕ್ಟ್‌ಗಳನ್ನು Amazon‌ ನ ಅಂತರರಾಷ್ಟ್ರೀಯ ಇಕಾಮರ್ಸ್ ಸೈಟ್‌ಗಳಾದ www.amazon.com, www.amazon.co.uk, www.amazon.de, www.amazon.ae ಇತ್ಯಾದಿಗಳಲ್ಲಿ ಲಿಸ್ಟಿಂಗ್ ಮಾಡಬಹುದು ಮತ್ತು ಮಾರಾಟ ಮಾಡಬಹುದು, ಇದು 200+ ದೇಶಗಳಲ್ಲಿ ಕಸ್ಟಮರ್‌ಗಳಿಗೆ ತಮ್ಮ ಪ್ರಾಡಕ್ಟ್‌ಗಳನ್ನು ಪ್ರದರ್ಶಿಸಲು ಅನುವು ಮಾಡಿಕೊಡುತ್ತದೆ
Amazon ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ನಾನು ಯಾವ ಪ್ರಾಡಕ್ಟ್‌ಗಳನ್ನು ಮಾರಾಟ ಮಾಡಬಹುದು?
ಭಾರತೀಯ ಮಾರಾಟಗಾರರಿಂದ ಹೆಚ್ಚು ಮಾರಾಟವಾಗುವ ಪ್ರಾಡಕ್ಟ್ ವರ್ಗಗಳು

ಹೋಮ್ ಎಸೆನ್ಷಿಯಲ್ಸ್ (ಬೆಡ್‌ಶೀಟ್‌ಗಳು, ಪಿಲ್ಲೊ ಕವರ್, ಕರ್ಟೈನ್ಸ್ ಮತ್ತು ಇನ್ನಷ್ಟು)
ಆರೋಗ್ಯ ಮತ್ತು ವೈಯಕ್ತಿಕ ಆರೈಕೆ (ನೈರ್ಮಲ್ಯ, ವೈಯಕ್ತಿಕ ಆರೈಕೆ, ಮನೆ ಆರೈಕೆ, ಟೈಲೆಟರಿಗಳು ಮತ್ತು ಇನ್ನಷ್ಟು)
ಸೌಂದರ್ಯ ಉತ್ಪನ್ನಗಳು (ಪರ್ಸನಲ್ ಗ್ರೂಮಿಂಗ್, ಮೇಕಪ್ ಮತ್ತು ಇನ್ನಷ್ಟು)
ಉಡುಪು (ಪುರುಷರ, ಮಹಿಳೆಯರ, ಮಕ್ಕಳ ಫ್ಯಾಷನ್)
ಕಚೇರಿ ಪ್ರಾಡಕ್ಟ್‌ಗಳು (ಕಚೇರಿ ಎಸೆನ್ಷಿಯಲ್ಸ್, ಡೈರಿ, ನೋಟ್‌ಪ್ಯಾಡ್, ನಾವೆಲ್ಟಿಗಳು ಮತ್ತು ಇನ್ನಷ್ಟು)

ಭಾರತೀಯ ಮಾರಾಟಗಾರರಿಂದ ವೇಗವಾಗಿ ಬೆಳೆಯುತ್ತಿರುವ ಪ್ರಾಡಕ್ಟ್ ವಿಭಾಗಗಳು

ವೈದ್ಯಕೀಯ ಉಪಕರಣಗಳು (ಥರ್ಮಾಮೀಟರ್‌ಗಳು, BP ಮಾನಿಟರ್‌ಗಳು ಮತ್ತು ಇನ್ನಷ್ಟು)
ವೈಜ್ಞಾನಿಕ ಉಪಕರಣಗಳು (ಲ್ಯಾಬ್ ಪರಿಕರಗಳು, ಕ್ಯಾಲ್ಕುಲೇಟರ್, ಲ್ಯಾಬ್ ಎಸೆನ್ಷಿಯಲ್ಸ್ ಮತ್ತು ಇನ್ನಷ್ಟು)
ಆಟಿಕೆಗಳು ಮತ್ತು ಕ್ರೀಡೆ (ಮಕ್ಕಳ ಆಟಿಕೆಗಳು, ಕಲಿಕೆ/ ಚಟುವಟಿಕೆ ಬಾಕ್ಸ್, ರೊಬೊಟಿಕ್ ಆಟಿಕೆಗಳು ಮತ್ತು ಇನ್ನಷ್ಟು)
ಕರಕುಶಲ ವಸ್ತುಗಳು (ತಂಜಾವೂರು ಬಬಲ್ ಹೆಡ್ಸ್, ವರ್ಣಚಿತ್ರಗಳು, ಚನ್ನಪಟ್ಟಣ ಆಟಿಕೆಗಳು, ಇತ್ಯಾದಿ)
ಆಯುರ್ವೇದ (ಪರ್ಸನಲ್ ಕೇರ್, ಹೆಲ್ತ್ ಸಪ್ಲಿಮೆಂಟ್‌ಗಳು ಮತ್ತು ಇನ್ನಷ್ಟು)
Amazon ನಲ್ಲಿ ಮಾರಾಟಗಾರನಾಗಿ ನೋಂದಾಯಿಸಲು ನನಗೆ ಏನು ಬೇಕು?
Amazon ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ನಿಮ್ಮನ್ನು ಮಾರಾಟಗಾರರಾಗಿ ನೋಂದಾಯಿಸಲು, ನಿಮಗೆ ಇವುಗಳ ಅಗತ್ಯವಿದೆ
 • ಇಮೇಲ್ ID ಮತ್ತು ಮೊಬೈಲ್ ಸಂಖ್ಯೆ
 • ಬ್ಯುಸಿನೆಸ್‌ನ ಮಾನ್ಯವಾದ ವಿಳಾಸ
 • ಕ್ರೆಡಿಟ್ ಕಾರ್ಡ್ ಮತ್ತು ಕಂಪನಿ/ವೈಯಕ್ತಿಕ ಬ್ಯಾಂಕ್ ಸ್ಟೇಟ್‌ಮೆಂಟ್
 • ರಾಷ್ಟ್ರೀಯ ID ಪುರಾವೆ
ಮೇಲಿನ ದಾಖಲೆಗಳ ಜೊತೆಗೆ ಯುರೋಪ್ ಮತ್ತು ಮಧ್ಯಪ್ರಾಚ್ಯದಲ್ಲಿ ಮಾರಾಟ ಮಾಡಲು ನಿಮಗೆ VAT ಡಾಕ್ಯುಮೆಂಟ್‌ನ ಅಗತ್ಯವಿದೆ. Amazon ವಿಶ್ವಾಸಾರ್ಹ ಥರ್ಡ್ ಪಾರ್ಟಿ ಸರ್ವಿಸ್‌ ಪ್ರೊವೈಡರ್‌ ಪಟ್ಟಿಯನ್ನು ಹೊಂದಿದ್ದು ಅದು ನಿಮಗೆ ಅಗತ್ಯವಿರುವ ದಾಖಲೆಗಳನ್ನು ಪಡೆಯಲು ಸಹಾಯ ಮಾಡುತ್ತದೆ.
ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾರಾಟವನ್ನು ನಾನು ಹೇಗೆ ಪ್ರಾರಂಭಿಸಬಹುದು?
ನೀವು Amazon ನೊಂದಿಗೆ ಸರಳ ಮತ್ತು ತೊಂದರೆ ಮುಕ್ತ ರೀತಿಯಲ್ಲಿ ಭಾರತದಿಂದ ರಫ್ತು ಮಾಡಬಹುದು. ನೀವು ಮಾಡಬೇಕಾಗಿರುವುದಿಷ್ಟೇ:
 • ನೀವು ಮಾರಾಟ ಮಾಡಲು ಬಯಸುವ ಪ್ರಾಡಕ್ಟ್ ಆಯ್ಕೆಮಾಡಿ
 • ನೀವು ಮಾರಾಟ ಮಾಡಲು ಬಯಸುವ ಮಾರುಕಟ್ಟೆ ಆಯ್ಕೆಮಾಡಿ
 • Amazon ಗ್ಲೋಬಲ್ ಮಾರಾಟ ಮೂಲಕ ನೋಂದಾಯಿಸಿ ಮತ್ತು ನಿಮ್ಮ ಪ್ರಾಡಕ್ಟ್‌ಗಳನ್ನು ಕಾಣುವಂತೆ ಇರಿಸಿ
 • Amazon ಸಲ್ಯೂಶನ್ ಪ್ರೊವೈಡರ್ ನೆಟ್‌ವರ್ಕ್ ಪಾಲುದಾರರ ಮೂಲಕ ನಿಮ್ಮ ಪ್ರಾಡಕ್ಟ್‌ಗಳನ್ನು Amazon ಫುಲ್‌ಫಿಲ್ಮೆಂಟ್ ಸೆಂಟರ್‌ಗಳಿಗೆ ಶಿಪ್‌ ಮಾಡಿ
ಇವುಗಳಲ್ಲಿ Amazon ನಿಮಗೆ ಸಹಾಯ ಮಾಡುತ್ತದೆ
 • ಆಧುನಿಕ ಪುಲ್‌ಫಿಲ್ಮೆಂಟ್ ಸೆಂಟರ್‌ಗಳಲ್ಲಿ ನಿಮ್ಮ ಪ್ರಾಡಕ್ಟ್‌ಗಳ ಸಂಗ್ರಹಣೆ
 • ನಿಮ್ಮ ಪ್ರಾಡಕ್ಟ್ ಅನ್ನು ಪ್ರಪಂಚದಾದ್ಯಂತ ಹುಡುಕುತ್ತಿರುವ ಕಸ್ಟಮರ್‌ಗಳಿಗೆ ಪ್ರದರ್ಶಿಸಲಾಗುತ್ತಿದೆ
 • ಅವರು ಆರ್ಡರ್ ಮಾಡಿದ ನಂತರ 2 ದಿನಗಳಲ್ಲಿ ಪ್ರಾಡಕ್ಟ್ ಅನ್ನು ಪ್ಯಾಕಿಂಗ್ ಮತ್ತು ಡೆಲಿವರಿ ಮಾಡಲಾಗುವುದು
 • ಪೇಮೆಂಟ್‌ಗಳನ್ನು ಮಾರಾಟಗಾರರ ಬ್ಯಾಂಕ್ ಖಾತೆಗೆ INR ಅಥವಾ ಅಂತರರಾಷ್ಟ್ರೀಯ ಕರೆನ್ಸಿಗಳಲ್ಲಿ ಅವರ ಆದ್ಯತೆಯ ಪ್ರಕಾರ ಜಮಾ ಮಾಡಲಾಗುತ್ತದೆ.
ಗಮನಿಸಿ - US, ಯುರೋಪ್, ಜಪಾನ್ ಮತ್ತು ಆಸ್ಟ್ರೇಲಿಯಾದಲ್ಲಿ (ವೃತ್ತಿಪರ ಸೆಲ್ಲಿಂಗ್ ಯೋಜನೆ) ಮಾರಾಟ ಮಾಡಲು Amazon ‌ನಲ್ಲಿ ನೋಂದಾಯಿಸಲು, USD 39.99 (US), EUR 25 (EU), JPY 4,900 ಮತ್ತು AUD 49.95 (AU) ಅನ್ನು ಸಬ್‌ಸ್ಕ್ರಿಪ್ಶನ್ ಫೀ ಆಗಿ ಚಾರ್ಜ್ ಮಾಡಲಾಗುತ್ತದೆ. ಇದಕ್ಕಾಗಿ, ನೀವು ಮಾನ್ಯ ಅಂತರರಾಷ್ಟ್ರೀಯ ಕ್ರೆಡಿಟ್ ಕಾರ್ಡ್ ಅನ್ನು ಒದಗಿಸಬೇಕಾಗುತ್ತದೆ.
ನನಗೆ Amazon India ಮಾರಾಟಗಾರ ಅಕೌಂಟ್ ಇಲ್ಲ, ನಾನು ಈಗಲೂ ಇತರ Amazon ಮಾರುಕಟ್ಟೆಗಳಲ್ಲಿ ಮಾರಾಟ ಮಾಡಬಹುದೇ?
ಹೌದು, ಜಾಗತಿಕವಾಗಿ ಮಾರಾಟ ಮಾಡಲು ನಿಮಗೆ Amazon India ಮಾರಾಟಗಾರ‌ ಅಕೌಂಟ್‌ನ ಅಗತ್ಯವಿಲ್ಲ. ನಿಮ್ಮ ಪ್ರಾಡಕ್ಟ್‌ಗಳನ್ನು ಮಾರಾಟ ಮಾಡಲು ನೀವು ಬಯಸುವ Amazon ಮಾರ್ಕೆಟ್‌ಪ್ಲೇಸ್‌ನಲ್ಲಿ ಮಾರಾಟಗಾರ ಅಕೌಂಟ್ ಅನ್ನು ನೋಂದಾಯಿಸಿ ಮತ್ತು ರಚಿಸಿ.
ನಾನು ಈಗಾಗಲೇ Amazon.in ‌ನಲ್ಲಿ ಮಾರಾಟ ಮಾಡುತ್ತಿದ್ದೇನೆ ಮತ್ತು seller central ಅಕೌಂಟ್ ಹೊಂದಿದ್ದೇನೆ, Amazon ‌ನೊಂದಿಗೆ ಜಾಗತಿಕವಾಗಿ ನಾನು ಹೇಗೆ ಮಾರಾಟ ಮಾಡಬಹುದು?
ನೀವು ಈಗಾಗಲೇ Amazon.in ‌ನಲ್ಲಿ ಮಾರಾಟ ಮಾಡುತ್ತಿದ್ದರೆ, ನೀವು ಮಾಡಬೇಕಾಗಿರುವುದು ನೀವು ಮಾರಾಟ ಮಾಡಲು ಬಯಸುವ ದೇಶವನ್ನು ನಿರ್ಧರಿಸಿ, ನಂತರ ಇಲ್ಲಿ ಉಲ್ಲೇಖಿಸಲಾದ ಸರಳ ಹಂತಗಳನ್ನು ಅನುಸರಿಸಿ.
Amazon ಪೇಮೆಂಟ್‌ಗಳನ್ನು ಹೇಗೆ ಸುಗಮಗೊಳಿಸುತ್ತದೆ?
ನಿಮ್ಮ ಆದ್ಯತೆಯ ಬ್ಯಾಂಕ್ ಖಾತೆಯಲ್ಲಿ ಮತ್ತು ನಿಮ್ಮ ಆದ್ಯತೆಯ ಕರೆನ್ಸಿಯಲ್ಲಿ (INR, USD, GBP, EUR, YEN, AED, ಇತ್ಯಾದಿ) ಮೊತ್ತವನ್ನು ಅನ್ನು ಜಮಾ ಮಾಡಲಾಗುವುದು ಎಂದು Amazon ಖಚಿತಪಡಿಸುತ್ತದೆ.
Amazon ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟ ವೆಚ್ಚ ಏನು?
Amazon ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ವೆಚ್ಚದ ರಚನೆಯು ನಿಮ್ಮ ಮಾರಾಟ ಯೋಜನೆ, ಪ್ರಾಡಕ್ಟ್‌ ವರ್ಗ, ಪುಲ್‌ಫಿಲ್ಮೆಂಟ್ ತಂತ್ರ ಮತ್ತು ಇತರ ಅಸ್ಥಿರಗಳ ಮೇಲೆ ಅವಲಂಬಿತವಾಗಿರುತ್ತದೆ. ನಿಮ್ಮ ಬ್ಯುಸಿನೆಸ್ ಗುರಿಗಳಿಗಾಗಿ ಹೆಚ್ಚು ಸೂಕ್ತವಾದ ಸಂಯೋಜನೆಯನ್ನು ಆಯ್ಕೆ ಮಾಡಲು ಅವಕಾಶ ನೀಡುವ ಆಯ್ಕೆಗಳು ಅನುಕೂಲಕರವಾಗಿರುತ್ತವೆ.

ಈಗ ಜಾಗತಿಕವಾಗಿ ನಿಮ್ಮ ವ್ಯಾಪಾರ ವಿಸ್ತರಿಸಿ!

ಜಾಗತಿಕವಾಗಿ ಮಾರಾಟ ಮಾಡುವ ಸಾವಿರಾರು ಭಾರತೀಯ ಮಾರಾಟಗಾರರ ಕುಟುಂಬಕ್ಕೆ ಸೇರಿಕೊಳ್ಳಿ
ಇಲ್ಲಿ Amazon ಗ್ಲೋಬಲ್ ಮಾರಾಟವನ್ನು ಅನುಸರಿಸಿ