AMAZON EASY-SHIP

ಒತ್ತಡ ಮುಕ್ತ ಡೆಲಿವರಿ

ಕ್ಯಾಶ್ ಆನ್ ಡೆಲಿವರಿ ಆಯ್ಕೆಗಳೊಂದಿಗೆ, ಭಾರತದಲ್ಲಿ ಸೇವೆ ಒದಗಿಸಬಹುದಾದ 99% ಪಿನ್‌ ಕೋಡ್‌ಗಳಿಗೆ ಡೆಲಿವರಿ ಮಾಡುತ್ತದೆ
Amazon Easy Ship
Amazon ಭರವಸೆ ನೀಡಿದ ಸಮಯಕ್ಕೆ ಸರಿಯಾಗಿ ಅಥವಾ ಅದಕ್ಕಿಂತ ಮೊದಲು ಪ್ರಾಡಕ್ಟ್ ಅನ್ನು ಉತ್ತಮ ಸ್ಥಿತಿಯಲ್ಲಿ ಕಸ್ಟಮರ್‌ಗಳಿಗೆ ಡೆಲಿವರಿ ಮಾಡುವ ಸಂಪೂರ್ಣ ಜವಾಬ್ದಾರಿಯನ್ನುತೆಗೆದುಕೊಳ್ಳುತ್ತದೆ.
ವಿನಾಯಕ್Todu Price

Amazon Easy-Ship ಎಂದರೇನು?

Amazon Easy Ship ಎನ್ನುವುದು Amazon.in ಸೆಲ್ಲರ್‌ಗಳಿಗೆ ಒದಗಿಸುವ ಸೇವೆಯಾಗಿದೆ. ನೀವು Amazon Easy Ship ಅನ್ನು ಆರಿಸಿದಾಗ, ನಿಮ್ಮ ಆರ್ಡರ್‌ಗಳನ್ನು ನಿಮ್ಮ ಸ್ಥಳದಿಂದ Amazon ಲಾಜಿಸ್ಟಿಕ್ಸ್‌ನ ಡೆಲಿವರಿ ಅಸೋಸಿಯೇಟ್ ಪಿಕಕ್‌ಅಪ್ ಮಾಡುತ್ತಾರೆ ಮತ್ತು ನೀವು ಸ್ವಲ್ಪ ಪ್ರಯತ್ನ ಮಾಡಿದರೆ ಸಾಕು ಖರೀದಿದಾರರ ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ.

ನಿಮ್ಮ ಕಸ್ಟಮರ್‌ಗಳಿಗೆ ಅವರ ಆರ್ಡರ್‌ಗಳು ಮತ್ತು ಡೆಲಿವರಿ ದಿನಾಂಕವನ್ನು ಟ್ರ್ಯಾಕ್ ಮಾಡಲು Easy Ship ಅನುಮತಿಸುತ್ತದೆ. Easy Ship ಮೂಲಕ ಪೇ ಆನ್ ಡೆಲಿವರಿ (ಕ್ಯಾಶ್ ಆನ್ ಡೆಲಿವರಿ ಎಂದೂ ಕರೆಯುತ್ತಾರೆ) ವೈಶಿಷ್ಟ್ಯವನ್ನು ಬಳಸಿಕೊಂಡು ಡೆಲಿವರಿಯ ಸಮಯದಲ್ಲಿ ಆರ್ಡರ್‌ಗಳಿಗೆ ಪೇಮೆಂಟ್‌ ಮಾಡುವ ಆಯ್ಕೆಯನ್ನು ಖರೀದಿದಾರರು ಪಡೆಯುತ್ತಾರೆ. ಆರ್ಡರ್‌ಗಳಿಗೆ ಹಣವನ್ನು ನಿಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ಠೇವಣಿ ಮಾಡಲಾಗುತ್ತದೆ.
ಇದಕ್ಕೆ ಸೂಕ್ತ: ನೀವು ನಿಮ್ಮ ಸ್ವಂತ ಗೋದಾಮು ಹೊಂದಿದ್ದರೆ ಮತ್ತು ವಿವಿಧ ಪ್ರಾಡಕ್ಟ್‌ಗಳನ್ನು ಕಿರಿದಾದ ಅಂಚುಗಳೊಂದಿಗೆ ಮಾರಾಟ ಮಾಡುತ್ತಿದ್ದರೆ ಮತ್ತು ಡೆಲಿವರಿ ಕಾರ್ಯವನ್ನು Amazon ‌ಗೆ ಬಿಡಲು ಬಯಸಿದರೆ, Easy-Ship ಅನ್ನು ಬಳಸುವುದರಿಂದ ಸಾಕಷ್ಟು ಅರ್ಥ ಬರುತ್ತದೆ.

Amazon Easy-Ship ಹೇಗೆ ಕೆಲಸ ಮಾಡುತ್ತದೆ?

Amazon Easy-Ship ನಿಮ್ಮ ಡೆಲಿವರಿ ತಲೆನೋವು ತೊಡೆದುಹಾಕಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ಬ್ಯುಸಿನೆಸ್‌ನ ಮೌಲ್ಯಮಾಪನ ಮಾಡಲು ಸಹಾಯ ಮಾಡುತ್ತದೆ.

ಹಂತ 1

ಸೆಲ್ಲರ್ ಆಗಿ ನೋಂದಾಯಿಸಿ ಮತ್ತು ನಿಮ್ಮ ಪ್ರಾಡಕ್ಟ್‌ಗಳನ್ನು ಲಿಸ್ಟ್ ಮಾಡಿ
Amazon.in ಮಾರಾಟಗಾರರಾಗಿ ನೋಂದಾಯಿಸಿ ಮತ್ತು ನಿಮ್ಮ ಅಕೌಂಟ್ ಅನ್ನು ಹೊಂದಿಸಲು Seller Central ಗೆ ಲಾಗಿನ್ ಮಾಡಿ. ನಿಮ್ಮ ಬ್ಯುಸಿನೆಸ್ ವಿವರಗಳನ್ನು ನವೀಕರಿಸಿ ಮತ್ತು Seller Central ಅಥವಾ Seller ಆ್ಯಪ್ ಬಳಸಿ ಅಲ್ಲಿ ಲಭ್ಯವಿರುವ ನಮ್ಮ ಬಳಸಲು ಸುಲಭವಾದ ಲಿಸ್ಟಿಂಗ್‌ಗಳ ಪರಿಕರಗಳ ಮೂಲಕ ನಿಮ್ಮ ಪ್ರಾಡಕ್ಟ್ ಲಿಸ್ಟಿಂಗ್‌ಗಳನ್ನು ಸೇರಿಸಿ.

ಹಂತ 2

ನಿಮ್ಮ ಪ್ರಾಡಕ್ಟ್‌ಗಳನ್ನು ನಿಮ್ಮ ಗೋದಾಮಿನಲ್ಲಿ ಸಂಗ್ರಹಿಸಿ ಮತ್ತು ಪಿಕಪ್‌ಗಳಿಗಾಗಿ Amazon ‌ಗೆ ವಿಳಾಸವನ್ನು ಒದಗಿಸಿ
ನಿಮ್ಮ ಪ್ರಾಡಕ್ಟ್‌ಗಳನ್ನು ನೀವು ಲಿಸ್ಟಿಂಗ್ ಮಾಡಿದ ನಂತರ, ನಿಮ್ಮ ಪ್ರಾಡಕ್ಟ್‌ಗಳನ್ನು ನಿಮ್ಮ ಗೋದಾಮಿನಲ್ಲಿ ಸಂಗ್ರಹಿಸಿ. ನಿಮ್ಮ Seller Central Easy Ship ಸೆಟ್ಟಿಂಗ್‌ಗಳಲ್ಲಿ, ನಮ್ಮ Amazon ಲಾಜಿಸ್ಟಿಕ್ಸ್ ಡೆಲಿವರಿ ಅಸೋಸಿಯೇಟ್‌ನಿಂದ ಸುಲಭವಾಗಿ ತೆಗೆದುಕೊಳ್ಳಲು ನಿಮ್ಮ ಗೋದಾಮಿನ ವಿಳಾಸವನ್ನು ನೀವು ಒದಗಿಸಬಹುದು.

ಹಂತ 3

ನಿಮ್ಮ ಪ್ರಾಡಕ್ಟ್‌ಗಳಿಗೆ ಆರ್ಡರ್‌ಗಳನ್ನು ಪಡೆಯಿರಿ
Amazon.in ‌ನಲ್ಲಿ ಕಸ್ಟಮರ್ ನಿಮ್ಮಿಂದ ಆರ್ಡರ್ ಮಾಡಿದಾಗ, ನೀವು ಇಮೇಲ್, Seller Central ಮತ್ತು SMS ಮೂಲಕ ಆರ್ಡರ್ ನೋಟಿಫಿಕೇಶನ್ ಅನ್ನು ಪಡೆಯುತ್ತೀರಿ. ನಂತರ ನೀವು ಪಿಕ್‌ಅಪ್‌ ವ್ಯವಸ್ಥೆ ಮಾಡಬಹುದು ಮತ್ತು Amazon ‌ನ ಗೈಡ್‌ಲೈನ್‌ಗಳ ಪ್ರಕಾರ ಪ್ರಾಡಕ್ಟ್‌ ಅನ್ನು ಪ್ಯಾಕೇಜ್ ಮಾಡಬಹುದು ಮತ್ತು ಅದನ್ನು ಪಿಕ್‌ಅಪ್‌ಗಾಗಿ ತಯಾರಿಸಬಹುದು. ನೀವು Amazon ಪ್ಯಾಕೇಜಿಂಗ್ ವಸ್ತುಗಳನ್ನು ಸಹ ಬಳಸಬಹುದು.

ಹಂತ 4

Amazon ಕಸ್ಟಮರ್‌ಗೆ ನಿಮ್ಮ ಪ್ರಾಡಕ್ಟ್‌ಗಳನ್ನು ತಲುಪಿಸುತ್ತದೆ
ಭಾರತದ 99% ಪಿನ್ ಕೋಡ್‌ಗಳಿಗೆ ಡೆಲಿವರಿ ಮಾಡುವ ನಮ್ಮ ವಿಶ್ವ ದರ್ಜೆಯ ಫುಲ್‌ಫಿಲ್ಮೆಂಟ್ ನೆಟ್‌ವರ್ಕ್ ಮೂಲಕ, ನಿಮ್ಮ ಪ್ರಾಡಕ್ಟ್‌ಗಳನ್ನು ಕಸ್ಟಮರ್‌ಗೆ ತ್ವರಿತವಾಗಿ ಮತ್ತು ವಿಶ್ವಾಸದಿಂದ ಡೆಲಿವರಿ ಮಾಡುತ್ತೇವೆ. ನಿಮ್ಮ ಕಸ್ಟಮರ್‌ಗಳು ತಮ್ಮ ಆರ್ಡರ್‌ಗಳನ್ನು ಟ್ರ್ಯಾಕ್ ಮಾಡಬಹುದು. ಹ್ಯಾಪಿ ಕಸ್ಟಮರ್ ಎಂದರೆ 5-ಸ್ಟಾರ್ ರೇಟಿಂಗ್ ಮತ್ತು ಹೆಚ್ಚಿನ ಆರ್ಡರ್‌ಗಳನ್ನು ಸ್ವೀಕರಿಸಲು ಉತ್ತ ಮ ಅವಕಾಶ.
Amazon Easy Ship ಕುರಿತು, ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಮತ್ತು ನಿಮಗಾಗಿ ಸರಿಯಾದ ಡೆಲಿವರಿ ವಿಧಾನವನ್ನು ಆರಿಸುವುದರ ಕುರಿತು ನಾವು ನಿಯಮಿತವಾಗಿ ಉಚಿತ ವೆಬ್‌ನಾರ್‌ಗಳನ್ನು ಹೋಸ್ಟ್‌ ಮಾಡುತ್ತೀರುತ್ತೇವೆ
ಪ್ರಾರಂಭಿಸಲು ಸಹಾಯ ಬೇಕೇ?
Easy-Shipಗೆ ಸ್ಥಳಾಂತರಗೊಳಿಸುವುದರಿಂದ ನಮ್ಮ ಎಲ್ಲಾ ತೊಂದರೆಗಳನ್ನು ನೋಡಿಕೊಳ್ಳಲಾಗುತ್ತಿದೆ ಮತ್ತು ಟ್ರ್ಯಾಕಿಂಗ್ ಅದ್ಭುತವಾಗಿದೆ. ನಾವು ಮೊದಲು ಲಭ್ಯವಿಲ್ಲದ ಕ್ಯಾಶ್ ಆನ್ ಡೆಲಿವರಿ ಅನ್ನು ಸಹ ಪ್ರಾರಂಭಿಸಿದ್ದೇವೆ.
ಯೋಗೇಶ್ ವಾಧ್ವಾDMP ಕ್ಯಾರಿಕೇಸ್‌ಗಳು
ಇನ್ನೂ ಮನವರಿಕೆಯಾಗಲಿಲ್ಲವೇ?

Amazon Easy-Ship ನ ಲಾಭಗಳು

Easy-Ship ನ ಪ್ರಯೋಜನಗಳು - ಒತ್ತಡ ಉಚಿತ ಶಿಪ್ಪಿಂಗ್
ಒತ್ತಡ ರಹಿತ ಶಿಪ್ಪಿಂಗ್
Amazon Easy-Ship ಆರಿಸುವ ಮೂಲಕ, ನಿಮ್ಮ ಮನೆ ಅಥವಾ ಕಚೇರಿಯಲ್ಲಿ ನಿಮ್ಮ ಅನುಕೂಲದ ಸ್ಥಳದಲ್ಲಿ ಇದ್ದುಕೊಂಡು ನಿಮ್ಮ ಪ್ರಾಡಕ್ಟ್ ಅನ್ನು ನೀವು ಶಿಪ್‌ಮಾಡಬಹುದು.
Easy-Ship ನ ಪ್ರಯೋಜನಗಳು - ನಿಮ್ಮ ವಿಳಾಸದಿಂದ ಪಿಕ್‌ಅಪ್
ನಿಮ್ಮ ವಿಳಾಸದಿಂದ ಪಿಕ್‌ಅಪ್
Amazon Easy-Ship ಮೂಲಕ, ನಿಮ್ಮ ಪಿಕ್ ಅಪ್ ವಿಳಾಸದಿಂದ ಶಿಪ್‌ಮೆಂಟ್ ಅನ್ನು ತೆಗೆದುಕೊಳ್ಳುವ ಅನುಕೂಲವನ್ನು ನಾವು ನಿಮಗೆ ನೀಡುತ್ತೇವೆ.
Easy-Shipನ ಪ್ರಯೋಜನಗಳು - ಕಸ್ಟಮ್ ಪ್ಯಾಕೇಜಿಂಗ್
ಕಸ್ಟಮ್ ಪ್ಯಾಕೇಜಿಂಗ್
ನಿಮ್ಮ ಪ್ರಾಡಕ್ಟ್‌ಗಳನ್ನು ಪ್ಯಾಕೇಜ್ ಮಾಡಲು ನೀವು Amazon ಪ್ಯಾಕೇಜಿಂಗ್ ವಸ್ತುಗಳನ್ನು ಖರೀದಿಸಬಹುದು, ಅಥವಾ ನಿಮ್ಮ ಸ್ವಂತ ಪ್ಯಾಕೇಜಿಂಗ್ ವಸ್ತುಗಳನ್ನು ನೀವು ಬಳಸಬಹುದು.
Easy-Ship ನ ಪ್ರಯೋಜನಗಳು - ಡಿಲೆವರಿಯ ಸಮಯದಲ್ಲಿ ಪಾವತಿಸಿ
ಕ್ಯಾಶ್ ಆನ್ ಡೆಲಿವರಿ ಪೇಮೆಂಟ್‌ಗಳು
ನಿಮ್ಮ Easy Ship ಆರ್ಡರ್‌ಗಳನ್ನು ಪೇ ಆನ್ ಡೆಲಿವರಿ (ಕ್ಯಾಶ್ ಆನ್ ಡೆಲಿವರಿ ಎಂದೂ ಕರೆಯುತ್ತಾರೆ) ನೊಂದಿಗೆ ಸಕ್ರಿಯಗೊಳಿಸಲಾಗುತ್ತದೆ, ಇದನ್ನು ಭಾರತದಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಅಮೌಂಟ್ ಅನ್ನು ನಿಮ್ಮ ಬ್ಯಾಂಕ್ ಅಕೌಂಟ್‌ನಲ್ಲಿ ನೇರವಾಗಿ ಡೆಪಾಸಿಟ್ ಮಾಡಲಾಗುತ್ತದೆ.
ಹೆಚ್ಚು ಮಾಹಿತಿಗಾಗಿ ಹುಡುಕುತ್ತಿರುವಿರಾ? ಡೆಲಿವರಿಯ ಜೊತೆಗೆ ಪ್ಯಾಕಿಂಗ್ ಮತ್ತು ಸಂಗ್ರಹಣೆಯನ್ನೂ ನಾವು ನೋಡಿಕೊಳ್ಳಬಹುದು

ಇಂದೇ ನಿಮ್ಮ ಆನ್‌ಲೈನ್ ಮಾರಾಟ ಪ್ರಯಾಣ ಆರಂಭಿಸಿ

ಒತ್ತಡರಹಿತ ಡೆಲಿವರಿ ಆಯ್ಕೆಗಳೊಂದಿಗೆ Amazon.in ‌ನಲ್ಲಿ ಶಾಪಿಂಗ್ ಮಾಡುವ ಕೋಟ್ಯಂತರ ಕಸ್ಟಮರ್‌ಗೆ ನಿಮ್ಮ ಪ್ರಾಡಕ್ಟ್‌ಗಳು ಲಭ್ಯವಾಗುವಂತೆ ಮಾಡಿ