Amazon Seller > Grow Your Business > Selling Partner Appstore

ಮಾರಾಟ ಪಾಲುದಾರ ಆ್ಯಪ್ ಸ್ಟೋರ್

ನಿಮ್ಮ ವ್ಯಾಪಾರವನ್ನು ಸ್ವಯಂಚಾಲಿತಗೊಳಿಸಲು, ನಿರ್ವಹಿಸಲು ಮತ್ತು ಅಭಿವೃದ್ಧಿಪಡಿಸಲು Amazon-ಅನುಮೋದಿತ ಥರ್ಡ್-ಪಾರ್ಟಿ ಸಾಫ್ಟ್‌ವೇರ್ ಪಾಲುದಾರರನ್ನು ಅನ್ವೇಷಿಸಿ.
ಮಾರ್ಕೆಟ್‌ಪ್ಲೇಸ್ ಆ್ಯಪ್ ಸ್ಟೋರ್ ಮತ್ತು SPN ವೀಡಿಯೊ ಪೂರ್ವವೀಕ್ಷಣೆ

ಸರಾಸರಿಯಾಗಿ, ಮಾರಾಟಗಾರರು ಅಪ್ಲಿಕೇಶನ್‌ಗಳನ್ನು ಅಳವಡಿಸಿಕೊಂಡ ನಂತರ ಮಾರಾಟದಲ್ಲಿ 10% ಏರಿಕೆಯನ್ನು ಕಾಣುತ್ತಾರೆ.

ವಿಶ್ವಾಸಾರ್ಹ ಥರ್ಡ್-ಪಾರ್ಟಿ ಸಾಫ್ಟ್‌ವೇರ್ ಪಾಲುದಾರರು

ಸ್ವಯಂಚಾಲಿತ ಬೆಲೆ ಮತ್ತು ಲಿಸ್ಟಿಂಗ್ ಪರಿಕರಗಳಿಂದ ಹಿಡಿದು ಶಿಪ್ಪಿಂಗ್ ಮತ್ತು ತೆರಿಗೆ ಸೇವೆಗಳವರೆಗೆ, ನಿಮ್ಮ ಅನನ್ಯ ವ್ಯಾಪಾರ ಅಗತ್ಯಗಳನ್ನು ಪೂರೈಸಲು ಪ್ರಬಲ ಅಪ್ಲಿಕೇಶನ್‌ಗಳನ್ನು ಅನ್ವೇಷಿಸಿ ಮತ್ತು ಪರಿಹಾರಗಳನ್ನು ಕಂಡುಕೊಳ್ಳಿ. ನಾವು ಎಲ್ಲಾ ಸಾಫ್ಟ್‌ವೇರ್ ಪಾಲುದಾರರನ್ನು ಪರಿಶೀಲಿಸುತ್ತೇವೆ ಮತ್ತು ಉತ್ತಮ ಗುಣಮಟ್ಟದ ಆ್ಯಪ್‌‌ಗಳು ಮಾರಾಟ ಪಾಲುದಾರ ಆ್ಯಪ್‌ಸ್ಟೋರ್‌ನಲ್ಲಿವೆ ಎಂದು ಖಚಿತಪಡಿಸಿಕೊಳ್ಳಲು ಅವರ ಕಾರ್ಯಕ್ಷಮತೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತೇವೆ. ಅನೇಕ ಆ್ಯಪ್‌ಗಳು ಪ್ರಾಡಕ್ಟ್ ಸಂಶೋಧನೆ, ತೆರಿಗೆ ಫಾರ್ಮ್‌ಗಳನ್ನು ಭರ್ತಿ ಮಾಡುವುದು ಅಥವಾ ಕಸ್ಟಮೈಸ್ ಮಾಡಿದ ರಿಪೋರ್ಟ್‌ಗಳನ್ನು ನಿರ್ಮಿಸುವುದು ಮುಂತಾದ ಸಮಯ ತೆಗೆದುಕೊಳ್ಳುವ ಮತ್ತು ಬೇಸರದ ದೈನಂದಿನ ಕಾರ್ಯಗಳನ್ನು ಸ್ವಯಂಚಾಲಿತಗೊಳಿಸುವತ್ತ ಗಮನ ಹರಿಸುತ್ತವೆ.

2500+

ಅಪ್ಲಿಕೇಶನ್‌ಗಳು

20+

ದೇಶಗಳು:

1.4MM+

ಮಾರಾಟಗಾರರು

ಮಾರಾಟ ಪಾಲುದಾರ ಆ್ಯಪ್ ಸ್ಟೋರ್ ಅನ್ನು ಅನ್ವೇಷಿಸಿ

ಐಕಾನ್: ಫ್ಲೋಟಿಂಗ್ ಡಾಲರ್ ಚಿಹ್ನೆಯನ್ನು ಹೋಲ್ಡ್ ಮಾಡಿರುವ ಕೈ

ಸರ್ಚ್ ಮಾಡಿ

ಸರ್ಚ್ ಮತ್ತು ಫಿಲ್ಟರ್ ಕ್ರಿಯಾತ್ಮಕತೆಯೊಂದಿಗೆ ನಿಮ್ಮ ನಿರ್ದಿಷ್ಟ ಅಗತ್ಯಗಳಿಗಾಗಿ ಸರಿಯಾದ ಪರಿಹಾರವನ್ನು ಕಂಡುಹಿಡಿಯುವ ಸಮಯ ಮತ್ತು ಪ್ರಯತ್ನವನ್ನು ಉಳಿಸಿ.
ಐಕಾನ್: ಸ್ಪಾಟ್ ಲೈಟ್ ಆಗಿ ಬೆಳಗುತ್ತಿರುವ ಸ್ಟೇಜ್ ಲೈಟ್‌ಗಳು

ಡಿಸ್ಕವರಿ

"ನಿಮಗಾಗಿ ಶಿಫಾರಸು ಮಾಡಲಾಗಿದೆ" ಮತ್ತು "ಟ್ರೆಂಡಿಂಗ್ ಆ್ಯಪ್‌‌ಗಳು" ನಂತಹ ಸಂಗ್ರಹಣೆಗಳನ್ನು ಅನ್ವೇಷಿಸಿ.
ಐಕಾನ್: 3 ಸ್ಲೈಡಿಂಗ್ ಹೊಂದಾಣಿಕೆಗಳನ್ನು ಹೊಂದಿರುವ ಆಯತ

ಫಿಲ್ಟರ್‌ಗಳು

ವಿಭಾಗ, ಉಪವಿಭಾಗ, ಬೆಂಬಲಿತ ಪ್ರೋಗಾಮ್‌ಗಳು, ಸ್ಟಾರ್ ರೇಟಿಂಗ್, ಭಾಷೆ, ಬೆಂಬಲಿತ ಮಾರ್ಕೆಟ್‌ಪ್ಲೇಸ್, ಮತ್ತು ಹೆಚ್ಚಿನವುಗಳಿಂದ ಫಿಲ್ಟರ್ ಮಾಡಿ.
ಐಕಾನ್: ಸ್ಟಾರ್‌ಬರ್ಸ್ಟ್ ರೇಖೆಗಳನ್ನು ಹೊಂದಿರುವ ವೃತ್ತ, ಒಳಗೆ ಡಾಲರ್ ಚಿಹ್ನೆ ಮತ್ತು ಅದರ ಮೇಲೆ ಸುಳಿದಾಡುತ್ತಿರುವ ಕರ್ಸರ್

ಕರೆನ್ಸಿ ಸೆಲೆಕ್ಟರ್:

ನೀವು ಬೆಲೆಗಳನ್ನು ನೋಡಲು ಬಯಸುವ ಕರೆನ್ಸಿಯನ್ನು ಆರಿಸಿ.
ಐಕಾನ್: ಪೈ ಚಾರ್ಟ್ ಮತ್ತು ಗ್ರಾಫ್‌ಗಳೊಂದಿಗೆ ಕಂಪ್ಯೂಟರ್ ಮಾನಿಟರ್

ವಿವರಗಳ ಪುಟ

ಖರೀದಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡಲು ಮಾಹಿತಿ ಮತ್ತು ಪ್ರೈಸಿಂಗ್ ಅನ್ನು ಪಡೆಯಿರಿ, ಸ್ಕ್ರೀನ್‌ಶಾಟ್‌ಗಳನ್ನು ನೋಡಿ ಮತ್ತು ಇನ್ನಷ್ಟು.
ಐಕಾನ್: ಅದರಿಂದ ಹೊರಬರುವ ರೇಖೆಗಳನ್ನು ಹೊಂದಿರುವ ನಕ್ಷತ್ರ

ರೇಟಿಂಗ್‌ಗಳು ಮತ್ತು ವಿಮರ್ಶೆಗಳು:

ತಿಳುವಳಿಕೆಯುಳ್ಳ ಖರೀದಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡಲು ಪ್ರತಿ ಪರಿಹಾರಕ್ಕಾಗಿ ರೇಟಿಂಗ್‌ಗಳು ಮತ್ತು ವಿಮರ್ಶೆಗಳನ್ನು ವೀಕ್ಷಿಸಿ.

ಸರಾಸರಿಯಾಗಿ, ಲಿಸ್ಟಿಂಗ್ ಆ್ಯಪ್‌‌ಗಳನ್ನು ಬಳಸುವ ಮಾರಾಟಗಾರರು ತಮ್ಮ ಪ್ರಾಡಕ್ಟ್‌ಗಳನ್ನು 37% ವೇಗವಾಗಿಪಟ್ಟಿ ಮಾಡುತ್ತಾರೆ.

ಬೆಳೆಯುತ್ತಿರುವ ವಿಭಾಗಗಳಲ್ಲಿ ಸಾಫ್ಟ್‌ವೇರ್ ಪಾಲುದಾರರನ್ನು ಅನ್ವೇಷಿಸಿ

ಪ್ರಾಡಕ್ಟ್ ಲಿಸ್ಟಿಂಗ್

 • ಪ್ರಾಡಕ್ಟ್ ಸಂಶೋಧನೆ ಮತ್ತು ಸ್ಕೌಟಿಂಗ್
 • ಲಿಸ್ಟಿಂಗ್
 • ಆಟೊಮೇಟ್ ಪ್ರೈಸಿಂಗ್

ಇನ್ವೆಂಟರಿ ಮತ್ತು ಶಿಪ್ಪಿಂಗ್

 • ಇನ್ವೆಂಟರಿ ಮತ್ತು ಆರ್ಡರ್ ನಿರ್ವಹಣೆ
 • ಶಿಪ್ಪಿಂಗ್ ಪರಿಹಾರಗಳು

ಮಾರ್ಕೆಟಿಂಗ್

 • ಅಡ್ವಟೈಸಿಂಗ್ ಆಪ್ಟಿಮೈಸೇಶನ್
 • ಪ್ರಮೋಷನ್‍‌ಗಳು

ಇಕಾಮರ್ಸ್ ನಿರ್ವಹಣೆ

 • ಇಕಾಮರ್ಸ್ ಪರಿಹಾರ ಕನೆಕ್ಟರ್ಸ್
 • ಪೂರ್ಣ ಸೇವೆ ಪರಿಹಾರಗಳು
 • ಸಿಸ್ಟಂಗಳ ಇಂಟಿಗ್ರೇಟರ್ಗಳು

ಹಣಕಾಸು

 • ಅಕೌಂಟಿಂಗ್
 • ಫಂಡಿಂಗ್ ಮತ್ತು ಕ್ರೆಡಿಟ್
 • ತೆರಿಗೆಗಳು
 • ವಿಶ್ಲೇಷಣೆ ಮತ್ತು ವರದಿ
 • ವಿತರಣೆ ಪರಿಹಾರಗಳು

ಕಸ್ಟಮರ್ ತೊಡಗಿಸಿಕೊಳ್ಳುವಿಕೆ

 • ಫೀಡ್‌ಬ್ಯಾಕ್ ಮತ್ತು ವಿಮರ್ಶೆಗಳು
 • ಬಯ್ಯರ್-ಸೆಲ್ಲರ್ ಮೆಸೇಜಿಂಗ್

ಸರಾಸರಿಯಾಗಿ, ಆ್ಯಪ್‌‌‌ಗಳನ್ನು ಬಳಸುವ ಮಾರಾಟಗಾರರು ಲಿಸ್ಟಿಂಗ್ ಮಾಡಿದ ನಂತರ 43% ಕಡಿಮೆ ಅವಧಿಯಲ್ಲಿ ಮೊದಲ ಮಾರಾಟ ಹೊಂದಿರುತ್ತಾರೆ.

ಮಾರಾಟ ಪಾಲುದಾರ ಆ್ಯಪ್ ಸ್ಟೋರ್ ಅನ್ನು ಬಳಸುವುದು ಹೇಗೆ?

ಮಾರಾಟ ಪಾಲುದಾರ ಆ್ಯಪ್ ಸ್ಟೋರ್ ಅನ್ನು ಬಳಸುವುದು ಹೇಗೆ?

ಹಂತ 1

ಮಾರಾಟ ಪಾಲುದಾರ ಆಪ್‌ಸ್ಟೋರ್ ಹೋಮ್‌ಪೇಜ್‌ಗೆ ಭೇಟಿ ನೀಡಿ ಮತ್ತು ನಿಮ್ಮ ಮಾರಾಟಗಾರರ ಖಾತೆಗೆ ಲಾಗ್ ಇನ್ ಮಾಡಿ

ಹಂತ 2

ನಿಮ್ಮ ಬ್ಯುಸಿನೆಸ್‌ಗೆ ಸರಿಯಾದ ಪರಿಹಾರವನ್ನು ಕಂಡುಹಿಡಿಯಲು ಕೀವರ್ಡ್‌ಗಳನ್ನು ಬಳಸಿ ಬ್ರೌಸ್ ಮಾಡಿ ಅಥವಾ ಹುಡುಕಿ. ಟ್ರೆಂಡಿಂಗ್ ಆ್ಯಪ್‌‌ಗಳು ಮತ್ತು ನಿಮಗಾಗಿ ವಿನ್ಯಾಸಗೊಳಿಸಲಾದ ಶಿಫಾರಸು ಮಾಡಲಾದ ಆ್ಯಪ್‌‌ಗಳನ್ನು ಸಹ ನೀವು ಅನ್ವೇಷಿಸಬಹುದು.

ಹಂತ 3

ಫಿಲ್ಟರ್‌ಗಳನ್ನು ಬಳಸಿ, ನಿಮಗೆ ಬೇಕಾದುದನ್ನು ಹುಡುಕಲು ಬೆಲೆ, ಸ್ಟಾರ್ ರೇಟಿಂಗ್, ವಿಭಾಗ ಅಥವಾ ಇತರ ಆಯ್ಕೆಗಳ ಮೂಲಕ ನಿಮ್ಮ ಫಲಿತಾಂಶಗಳನ್ನು ನಿಖರಗೊಳಿಸಿ.

ಹಂತ 4

ಫಲಿತಾಂಶಗಳನ್ನು ಬ್ರೌಸ್ ಮಾಡಿ ಮತ್ತು ಚಿಕ್ಕ ವಿವರಣೆಯಿಂದ ಮೌಲ್ಯದ ಪ್ರತಿಪಾದನೆಯನ್ನು ತ್ವರಿತವಾಗಿ ಅರ್ಥಮಾಡಿಕೊಳ್ಳಿ.

ಹಂತ 5

ಒಮ್ಮೆ ನೀವು ಆಸಕ್ತಿ ಹೊಂದಿರುವ ಪರಿಹಾರವನ್ನು ನೀವು ಕಂಡುಕೊಂಡ ನಂತರ, ಇನ್ನಷ್ಟು ತಿಳಿದುಕೊಳ್ಳಲು ವಿವರಗಳ ಪುಟಕ್ಕೆ ಭೇಟಿ ನೀಡಿ.

ಹಂತ 6

ಹೆಚ್ಚಿನ ಮಾಹಿತಿಗಾಗಿ ಸಾಫ್ಟ್‌ವೇರ್ ಪಾಲುದಾರರ ವೆಬ್‌ಸೈಟ್‌ಗೆ ಭೇಟಿ ನೀಡಿ.

ಹಂತ 7

ಅಂತಿಮವಾಗಿ ವಿವರ ಪುಟದಲ್ಲಿನ “ಈಗ ಅಧಿಕೃತಗೊಳಿಸಿ” ಬಟನ್ ಕ್ಲಿಕ್ ಮಾಡುವ ಮೂಲಕ ನಿಮ್ಮ ಡೇಟಾವನ್ನು ಪ್ರವೇಶಿಸಲು ಅಪ್ಲಿಕೇಶನ್‌ಗೆ ಅನುಮತಿ ನೀಡಿ.

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ಆ್ಯಪ್‌ಗಳು Seller Central ನೊಂದಿಗೆ ಸಂಯೋಜನೆಯಾಗುತ್ತವೆಯೇ?
ಕೆಲವು ಆ್ಯಪ್‌ಗಳು ಪ್ರತ್ಯೇಕವಾಗಿರುತ್ತವೆ ಮತ್ತು ಇತರವುಗಳು ನೇರವಾಗಿ Seller Central ‌ನೊಂದಿಗೆ ಸಂಯೋಜನೆಗೊಳ್ಳುತ್ತವೆ, ಆದರೆ ಎಲ್ಲಾ ಆ್ಯಪ್‌ಗಳು Marketplace Web Service (MWS) ಮತ್ತು ಮಾರಾಟ ಪಾಲುದಾರ API ಗಳು ನೀಡುವ ಒಂದೇ ಡೇಟಾಗೆ ಪ್ರವೇಶವನ್ನು ಹೊಂದಿವೆ.
Amazon ಥರ್ಡ್ ಪಾರ್ಟಿ ಅಪ್ಲಿಕೇಶನ್‌ಗಳನ್ನು ಹೇಗೆ ಪರಿಶೀಲಿಸುತ್ತದೆ?
Amazon ನೋಂದಣಿ ಮತ್ತು ಲಿಸ್ಟಿಂಗ್ ಆದ ಮೇಲೆ ಎಲ್ಲಾ ಸಾಫ್ಟ್‌ವೇರ್ ಅನ್ನು ಪರಿಶೀಲಿಸುತ್ತದೆ, ಹಾಗೆಯೇ ಎಲ್ಲಾ ಆ್ಯಪ್‌ಗಳು Amazon ಪಾಲಿಸಿಗಳಿಗೆ ಅನುಗುಣವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಪರ್ಫಾರ್ಮೆನ್ಸ್ ಅನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತದೆ.
ನನ್ನ ಥರ್ಡ್ ಪಾರ್ಟಿ ಅಪ್ಲಿಕೇಶನ್‌ಗೆ ನಾನು ಬೆಂಬಲವನ್ನು ಎಲ್ಲಿ ಪಡೆಯಬಹುದು?
ಯಾವುದೇ ತಾಂತ್ರಿಕ ಬೆಂಬಲ ಅಥವಾ ಕಸ್ಟಮರ್ ಸರ್ವಿಸ್ ಪ್ರಶ್ನೆಗಳಿಗೆ ನೇರವಾಗಿ ಸಾಫ್ಟ್‌ವೇರ್ ಅಥವಾ ಸರ್ವಿಸ್ ಪಾಲುದಾರರನ್ನು ಸಂಪರ್ಕಿಸಿ. ಥರ್ಡ್ ಪಾರ್ಟಿ ಆ್ಯಪ್‌ಗಳ ಅಭಿವೃದ್ಧಿ ಅಥವಾ ಮಾರಾಟದಲ್ಲಿ Amazon ನೇರವಾಗಿ ತೊಡಗಿಸಿಕೊಂಡಿಲ್ಲ. ಮಾರಾಟ ಪಾಲುದಾರ ಆ್ಯಪ್ ಸ್ಟೋರ್ ನಲ್ಲಿ ರೇಟಿಂಗ್‌ಗಳು ಮತ್ತು ವಿಮರ್ಶೆಗಳನ್ನು ಮಾಡಿ ಎಂದು ಸಾಫ್ಟ್‌ವೇರ್‌ನ ಎಲ್ಲಾ ಬಳಕೆದಾರರನ್ನು ನಾವು ಪ್ರೋತ್ಸಾಹಿಸುತ್ತೇವೆ.
ಆ್ಯಪ್‌ಗಳ ವೆಚ್ಚ ಎಷ್ಟು?
ಸಾಫ್ಟ್‌ವೇರ್ ಪಾಲುದಾರರು ತಮ್ಮದೇ ಆದ ಬೆಲೆಗಳನ್ನು ಹೊಂದಿಸುತ್ತಾರೆ. ನಿರ್ದಿಷ್ಟ ಆ್ಯಪ್ ಅಥವಾ ಸರ್ವಿಸ್ ವಿವರ ಪುಟದಲ್ಲಿ ಬೆಲೆ ಮಾಹಿತಿ ಲಭ್ಯವಿದೆ.
ಮಾರಾಟ ಪಾಲುದಾರ ಆ್ಯಪ್ ಸ್ಟೋರ್‌ನಲ್ಲಿ ವಿಮರ್ಶೆಯನ್ನು ಮಾಡಲು ಯಾರು ಅರ್ಹರು?
ಆ್ಯಪ್ ಪರಿಶೀಲಿಸಿದ ಬಳಕೆದಾರರು ಮಾತ್ರ ಮತ್ತು ಸ್ವಲ್ಪ ಸಮಯದವರೆಗೆ ಆ್ಯಪ್ ಅನ್ನು ಬಳಸಿದ ನಂತರ ಆ ಆ್ಯಪ್‌ಗೆ ವಿಮರ್ಶೆಯನ್ನು ನೀಡಬಹುದು.
ರೇಟಿಂಗ್‌ಗಳನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ?
Amazon ಕಚ್ಚಾ ಡೇಟಾ ಸರಾಸರಿಗೆ ಬದಲಾಗಿ ಮಶಿನ್ ಕಲಿತ ಮಾದರಿಯ ಆಧಾರದ ಮೇಲೆ ಪ್ರಾಡಕ್ಟ್‌ನ ಸ್ಟಾರ್ ರೇಟಿಂಗ್‌ಗಳನ್ನು ಲೆಕ್ಕಾಚಾರ ಮಾಡುತ್ತದೆ. ಮಾದರಿಯು ರೇಟಿಂಗ್‌ನ ಕಾಲಾವಧಿ ಸೇರಿದಂತೆ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳುತ್ತದೆ, ರೇಟಿಂಗ್‌ಗಳು ಪರಿಶೀಲನೆ ಆದ ಖರೀದಿದಾರರು ಮತ್ತು ವಿಮರ್ಶಕರ ವಿಶ್ವಾಸಾರ್ಹತೆಯನ್ನು ಸ್ಥಾಪಿಸುವ ಅಂಶಗಳಿಂದ ಬಂದಿರಬಹುದು.
ನಾನು ಹೊಸ ಸಾಫ್ಟ್‌ವೇರ್ ಡೆವಲಪರ್. ಮಾರಾಟ ಪಾಲುದಾರ ಆ್ಯಪ್‌ಸ್ಟೋರ್‌ ನಲ್ಲಿ ನಾನು ಹೇಗೆ ಸೇರಬಹುದು?
ನೀವು ಸಾಫ್ಟ್‌ವೇರ್ ಡೆವಲಪರ್ ಆಗಿದ್ದರೆ ಮತ್ತು ಸಾಫ್ಟ್‌ವೇರ್ ಪಾಲುದಾರರಾಗಲು ಬಯಸಿದರೆ, ಹೆಚ್ಚಿನ ಮಾಹಿತಿಗಾಗಿ developer.amazonservices.com ಗೆ ಭೇಟಿ ನೀಡಿ.

ಮಾರಾಟ ಪಾಲುದಾರ ಆ್ಯಪ್ ಸ್ಟೋರ್

ನಿಮ್ಮ ವ್ಯಾಪಾರವನ್ನು ಸ್ವಯಂಚಾಲಿತಗೊಳಿಸಲು, ನಿರ್ವಹಿಸಲು ಮತ್ತು ಅಭಿವೃದ್ಧಿಪಡಿಸಲು Amazon-ಅನುಮೋದಿತ ಥರ್ಡ್-ಪಾರ್ಟಿ ಸಾಫ್ಟ್‌ವೇರ್ ಪಾಲುದಾರರನ್ನು ಅನ್ವೇಷಿಸಿ.